Schemes

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಸರ್ಕಾರದಿಂದ ಬಂಪರ್‌ ಆಫರ್!‌ ಸಿಗುತ್ತೆ ಭಾಗ್ಯಗಳ ಸುರಿಮಳೆ, ಎಲ್ಲ ಸೌಲಭ್ಯ ಸಂಪೂರ್ಣ ಉಚಿತ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಕಾರ್ಮಿಕ ಕಾರ್ಡ್‌ ಹೊಂದಿರುವ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರಿಗೆ ಉಪಯೋಗವಾಗಲಿದ್ದು ಈಗ ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಯಾವುದು ಈ ಯೋಜನೆ ಹೇಗೆ ಈ ಯೋಜನೆ ಪಡೆಯುದು ಎಂಬ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ಮಿಸ್‌ ಮಾಡದೇ ಓದಿ.

Labour Card Benefits
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ರಾಜ್ಯ ಸರ್ಕಾರವು ಕಾರ್ಮಿಕ ಕಾರ್ಡ್‌ ಹೊಂದಿರುವವರಿಗೆ ಎಲ್ಲರಿಗೂ ಶುಭ ಸುದ್ದಿಯನ್ನು ನೀಡಿದೆ ಅದೇನೆಂದರೆ ಪ್ರಮುಖ ಪಿಂಚಣಿ ಸೌಲಭ್ಯವನ್ನು ನೀಡಿದೆ ಕಾರ್ಮಿಕರು 3 ವರ್ಷ ಸದಸ್ಯರಾಗಿದ್ದು ನಿಮ್ಮ ಕುಟುಂಬದಲ್ಲಿ ಯಾರಿಗಾದರೂ 60 ವರ್ಷ ಆಗಿದ್ದರೆ ಮಾಸಿಕ ತಿಂಗಳಿಗೆ 1000 ರೂ ಪಿಂಚಣಿ ಸಿಗಲಿದೆ ಹೀಗೆ ಕಾರ್ಮಿಕ ಇಲಾಖೆಯು ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಹೆಚ್ಚಿನ ಯೋಜನೆಗಳು ಈ ಕೆಳಗಿನಂತಿವೆ.

ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು:

  1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.1,೦೦೦
  2. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.1,೦೦೦ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯ ಆಧಾರದ ಮೇಲೆ ರೂ.2,೦೦,೦೦೦ ದವರೆಗೆ ಅನುಗ್ರಹ ರಾಶಿ ಸಹಾಯಧನ ದೊರೆಯಲಿದೆ.
  3. ಟ್ರೈನಿಂಗ್ ಕಮ್ ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ. 2೦,೦೦೦ ವರೆಗೆ ಸಿಗಲಿದೆ.
  4. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,೦೦,೦೦೦ ವರೆಗೆ ಮುಂಗಡ ಸೌಲಭ್ಯ ದೊರೆಯಲಿದೆ
  5. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 3೦,೦೦೦ ಮತ್ತು ಗಂಡು ಮಗುವಿನ ಜನನಕ್ಕೆ ರೂ.2೦,೦೦೦ ಸಿಗಲಿದೆ
  6. ಅಂತ್ಯಕ್ರಿಯೆ ವೆಚ್ಚ : ರೂ.4,೦೦೦ ಹಾಗೂ ಅನುಗ್ರಹ ರಾಶಿ ರೂ.5೦,೦೦೦ ಸಹಾಯಧನ ಕಾರ್ಮಿಕ ಇಲಾಖೆಯಿಂದ ಸಿಗಲಿದೆ.

ಫಲಾನುಭವಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯೋಜನೆಗಳು:

  1. 1, 2 ಹಾಗೂ 3ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 2,೦೦೦
  2. 4, 5 ಹಾಗೂ 6ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 3,೦೦೦
  3. 7 ಹಾಗೂ 8ನೇ ತರಗತಿ ಉತ್ತೀರ್ಣರಾದವರಿಗೆ ರೂ. 4,೦೦೦
  4. 9, 10 ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6,೦೦೦
  5. ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದವರಿಗೆ ರೂ. 8,೦೦೦
  6.  ಐಟಿಐ ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 7,೦೦೦
  7.  ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 1೦,೦೦೦
  8. ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ. 2೦,೦೦೦ ಹಾಗೂ ಪ್ರತಿ ವರ್ಷ ರೂ.1೦,೦೦೦ ಗಳಂತೆ (ಎರಡು ವರ್ಷಗಳಿಗೆ)
  9. ಇಂಜಿನಿಯರಿಂಗ್ ಕೋರ್ಸ್ ಗೆ ಸೇರ್ಪಡೆಗೆ ರೂ.25,೦೦೦ ರೂ ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.2೦,೦೦೦
  10. ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಗೆ ರೂ.3೦,೦೦೦ ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.25,೦೦೦
  11.  ಪಿಹೆಚ್‌ಡಿ ಕೋರ್ಸ್ಗೆ ಪ್ರತಿ ವರ್ಷಕ್ಕೆ ರೂ.2೦,೦೦೦ ರೂ (ಗರಿಷ್ಠ ಎರಡು ವರ್ಷಗಳು) ಮತ್ತು  ಪಿಹೆಚ್‌ಡಿ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.2೦,೦೦೦

ಪ್ರತಿಭಾವಂತ ಮಕ್ಕಳಿಗಾಗಿ ಯೋಜನೆಗಳು:

  1. SSLC ಯಲ್ಲಿ 75% ಅಂಕ ಪಡೆದವರಿಗೆ 5000 ರೂ
  2. PUC ಯಲ್ಲಿ 75% ಅಂಕ ಪಡೆದವರಿಗೆ 7000 ರೂ
  3. ಪದವಿಯಲ್ಲಿ 75% ಅಂಕ ಪಡೆದವರಿಗೆ 10000 ರೂ
  4. ಸ್ನಾತಕೊತ್ತರ ಪದವಿಯಲ್ಲಿ 75% ಅಂಕ ಪಡೆದವರಿಗೆ 15000 ರೂ

ವೈದ್ಯಕೀಯ ಸಹಾಯಧನ: ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.3೦೦ ರಿಂದ ರೂ.1೦,೦೦೦ ವರೆಗೆ

ಅಪಘಾತ ಪರಿಹಾರ:  ಮರಣ ಹೊಂದಿದ್ದಲ್ಲಿ ರೂ.5,೦೦,೦೦೦, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,೦೦,೦೦೦ ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,೦೦,೦೦೦

  1. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೊಗ, ಕಿಡ್ನಿ , ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ,, ಗರ್ಭಕೋಶ ಶಸ್ತ್ರಚಿಕಿತ್ಸೆ,, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ ರೂ.2,೦೦,೦೦೦ ವರೆಗೆ ದೊರೆಯಲಿದೆ
  2. ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.5೦,೦೦೦ ಸಿಗಲಿದೆ
  3. LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ): ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
  4. ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ ಕಾರ್ಮಿಕರಿಗೆ ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
  5. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
  6. ತಾಯಿ ಮಗು ಸಹಾಯ ಹಸ್ತ: ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ.6,೦೦೦ ಗಳ ಸಹಾಯಧನ

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಕಾರ್ಮಿಕ ಕಾರ್ಡ್ ಗೆ ಅರ್ಜಿ ಹಾಕುವುದು ಎಲ್ಲಿ? ಮತ್ತು ಅರ್ಹತೆಗಳು

  • 18 ರಿಂದ 60 ವರ್ಷ ದೊಳಗಿರಬೇಕು.
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿರಬೇಕು

ಅರ್ಜಿಯನ್ನು CSC ಸೆಂಟರ್‌ ಗಳಲ್ಲಿ, ಕರ್ನಾಟಕ ಒನ್‌, ಗ್ರಾಮ ಒನ್‌ ಸೆಂಟರ್‌ ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

  • ಆಧಾರ್‌ ಕಾರ್ಡ್‌
  • ರೇಷನ್‌ ಕಾರ್ಡ್‌
  • ಬ್ಯಾಂಕ್‌ ಪಾಸ್‌ ಬುಕ್‌
  • ಪಾಸ್‌ ಪೋರ್ಟ್‌ ಸೈಜ್‌ ಪೋಟೊ
  • ಗುತ್ತಿಗೆದಾರರು ಅಥವಾ  CREDAI (Confederation of Real Estate Developers Association of India) ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ಅವರು ನೀಡುವ ‘ಉದ್ಯೋಗದ ದೃಢೀಕರಣ ಪತ್ರ’ 
  • ವಯಸ್ಸಿನ ದೃಢೀಕರಣ ಪತ್ರ

ಅರ್ಜಿ ಸಲ್ಲಿಸಲು ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ ಹಾಗೂ ಒಂದು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ ಒಮ್ಮೆ ರಿನಿವಲ್‌ ಮಾಡಬೇಕಾಗುತ್ತದೆ.

ಇತರೆ ವಿಷಯಗಳು:

‌Breaking News: ರೇಷನ್ ಕಾರ್ಡ್‌ ದಾರರಿಗೆ ಸರ್ಕಾರದಿಂದ ಬಿಗ್‌ ಶಾಕ್! ಜೂನ್‌ 30 ರೊಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ರೇಷನ್‌ ಕಾರ್ಡ್‌ ಇರಲ್ಲ

ಇಂದಿರಾ ಗಾಂಧಿ ಗ್ಯಾಸ್ ಸಬ್ಸಿಡಿ ಯೋಜನೆ ರಾಜ್ಯಾದ್ಯಂತ ಆರಂಭ, ಎಲ್ಲರಿಗೂ ಸಿಗಲಿದೆ ಕೇವಲ 685 ರೂ ಗೆ LPG ಸಿಲಿಂಡರ್

ಅನ್ನಭಾಗ್ಯ ಯೋಜನೆಗಾಗಿ ಹೊಸ ರೇಷನ್‌ ಕಾರ್ಡ್‌ ಪಟ್ಟಿ ಬಿಡುಗಡೆ! ಇಲ್ಲಿ ಹೆಸರಿದ್ದರೆ ಮಾತ್ರ ಸಿಗಲಿದೆ 10 ಕೆಜಿ ಅಕ್ಕಿ, ಇಲ್ಲಿಂದ ಹೆಸರನ್ನು ಪರಿಶೀಲಿಸಿ

Breaking News: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಬಿಗ್‌ ಶಾಕ್!‌ ಇನ್ಮೇಲೆ ಫ್ರೀ ಸಿಗಲ್ಲ FB ಮತ್ತು Insta; ಎಷ್ಟು ಕಟ್ಟಬೇಕು ಗೊತ್ತ?

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ