ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಆಧಾರ್ ಕಾರ್ಡ್ ರೇಷನ್ ಕಾರ್ಡ್ ನಂತೆಯೇ ರೈತರಿಗಾಗಿಯೇ ಪ್ರತ್ಯೇಕವಾಗಿ ಗುರುತಿನ ಐಡಿ ಕಾರ್ಡ್ ಇದೆ. ಈ ಐಡಿ ಕಾರ್ಡ್ ಇಲ್ಲದೇ ಇದ್ದರೆ ರೈತರಿಗೆ ಯಾವುದೇ ರೀತಿಯ ಸರ್ಕಾರದಿಂದ ಪ್ರಯೋಜನಗಳು ದೊರಕುವುದಿಲ್ಲ. ಈ ಕಾರ್ಡ್ ಯಾವುದು, ಇದರ ಲಾಭ ಏನು ಎಂಬುದು ನಾವು ಈ ಲೇಖನದಲ್ಲಿ ವಿವರವಾಗಿ ತಿಳಿಸುತ್ತೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ರೈತರೇ ನೀವು FID ರಿಜಿಸ್ಟರ್ ಆಗಿರಲೇಬೇಕು. ನೀವು ಈ ಕಾರ್ಡ್ ಮಾಡಿಸಿಕೊಂಡಿಲ್ಲ ಎಂದರೆ ಸರ್ಕಾರದ ಯಾವುದೇ ಕೃಷಿಗೆ ಸಂಬಂದಿಸಿದ ಲಾಭ ಅಥವಾ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರ್ಡ್‌ನಿಂದಾಗಿ ಸರ್ಕಾರದಿಂದ ಬರುವ ಎಲ್ಲಾ ರೀತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ತರಹದ ವಾಣಿಜ್ಯ ಬೆಳೆ, ಆಹಾರದ ಬೆಳೆಗಳಿಗೆ ಎಲ್ಲಾ ವರ್ಗದ ಕೃಷಿಕರು ತಮ್ಮ ಎಲ್ಲಾ ಜಮೀನಿನ ವಿವರವನ್ನು ನೋಂದಾಯಿಸುವುದು ಕಡ್ಡಾಯವಾಗಿದೆ.
ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಿದಾಗ ರೈತನಿಗೆ FID ನಂಬರ್ ಸಿಗುತ್ತದೆ. ಒಬ್ಬ ವ್ಯಕ್ತಿಗೆ ಆಧಾರ್, ಗುರುತಿನ ಚೀಟಿ ಇದ್ದಂತೆ ಹಾಗೆ ಕೃಷಿಕನಿಗೆ FID ಗುರುತಿನ ಚೀಟಿ ಮುಖ್ಯವಾಗಿದೆ. ಕೃಷಿಕರ ಜಮೀನಿನ ವಿವರ ಹಾಗೂ ಕೃಷಿಕನ ಬೆಳೆಯ ವಿವರ ಎಲ್ಲಾ ಮಾಹಿತಿಯನ್ನು ಈ ವೆಬ್ ಪೋರ್ಟಲ್ ನಲ್ಲಿ ನೋಡಬಹುದು. ಸರ್ಕಾರದ ಕೃಷಿ ಯೋಜನೆಯ ಎಲ್ಲಾ ಮಾಹಿತಿ ಪಡೆಯಬೇಕೆಂದರೆ ಈ ಗುರುತಿನ ಚೀಟಿ ಅಗತ್ಯವಾಗಿದೆ. ಇಲ್ಲದಿದ್ರೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ವಂಚಿತನಾಗುತ್ತಾನೆ.
ಇದನ್ನು ಸಹ ಓದಿ: ಕೇಂದ್ರ ಸರ್ಕಾರದಿಂದ ಜನ್ ಧನ್ ಖಾತೆ ಇರುವವರಿಗೆ 10 ಸಾವಿರ.! ನೇರ ನಿಮ್ಮ ಖಾತೆಗೆ ಜಮೆ.! 2 ಲಕ್ಷ ಇನ್ಸೂರೆನ್ಸ್ ಉಚಿತ.!
ನೋಂದಣಿ ಹೇಗೆ ಮಾಡುವುದು.?
ಮೊಬೈಲ್‌ನಲ್ಲಿಯೂ ಕೂಡ ನೀವು ನೋಂದಣಿ ಮಾಡಿಕೊಳ್ಳಬಹುದು. ಅಥವಾ ಕೃಷಿ ತೋಟಗಾರಿಕೆ ಇಲಾಖೆಯಲ್ಲಿ, ನೋಂದಾಯಿಸಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್, ಪಾಸ್ ಬುಕ್, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್ ಅಳತೆಯ ಒಂದು ಪೋಟೋ, ಮೊಬೈಲ್ ನಂಬರ್ ನೀಡಿದರೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಳ್ಳುತ್ತದೆ. FID ನಂಬರ್ ನಿಮಗೆ ಸಿಗುತ್ತದೆ.
ಯಾಕೆ ನೋಂದಾಯಿಸಬೇಕು.?
ಸರ್ಕಾರದ ಆದೇಶದಂತೆ ಕೃಷಿಕ ಇದನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳದೇ ಇದ್ದರೆ ಆತನಿಗೆ ವಿವಿಧ ಕೃಷಿ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ ಆಗಿರಬಹುದು, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಹಾಗೂ ಕೃಷಿಗೆ ಪೂರಕವಾದ ಇತರ ಸೌಲಭ್ಯ ಸಿಗುವುದಿಲ್ಲ.
ಬಜೆಟ್ ನಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ರೈತ ಶಕ್ತಿ ಯೋಜನೆಯಲ್ಲಿ ಕೃಷಿಕನು ಕೂಡ ಒಂದು ಎಕರೆಗೆ 250 ರುಪಾಯಿಯಂತೆ ಹಾಗೆ ಗರಿಷ್ಠ 5 ಎಕರೆಗೆ 1250 ರುಪಾಯಿ ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಸೌಲಭ್ಯ ಪಡೆಯಲು FID ಗೆ ನೋಂದಣಿಯಾಗಿದ್ದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |