ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಸಂತಸದ ಸುದ್ದಿಯನ್ನು ತಿಳಿಸಲಿದ್ದೇವೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಲವು ಭಾಗಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ತ್ರೀ ಶಕ್ತಿ ಸಂಘ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಮುಂದಿನ ವರ್ಷ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು ಮುಂದಿನ ವರ್ಷ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ರಾಜ್ಯದ ಮಹಿಳೆಯರಿಗೆ ಭರವಸೆಯನ್ನು ನೀಡಿದ್ದಾರೆ. ಸ್ತ್ರೀಶಕ್ತಿ ಸಂಘದ ಮಹಿಳೆಯರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿವ ಮೂಲಕ ಸಾಲಮನ್ನಾದ ಬಗ್ಗೆ ಮನವಿಯನ್ನು ಸಲ್ಲಿಸಿದರು. ಆದರೆ ನಾನು ಚುನಾವಣೆಯ ವೇಳೆ ಭರವಸೆಯನ್ನು ನೀಡಿರುವುದು ನಿಜ ಆದರೆ ಮುಂದಿನ ವರ್ಷ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂಬ ಭರವಸೆಯ ಮೂಲಕ ಕಳುಹಿಸಿದ್ದಾರೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾಕ್ಕೆ 2,400 ಕೋಟಿ
ರಾಜ್ಯಾದ್ಯಂತ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲು 2,400 ಕೋಟಿ ವೆಚ್ಚವಾಗುತ್ತದೆ. ಹೀಗಾಗಿ ಈ ವರ್ಷ ಸಾಲ ಮನ್ನಾ ಮಾಡಲು ಆಗುವುದಿಲ್ಲ ಮುಂದಿನ ವರ್ಷ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಭರವಸೆ ನೀಡಿದ್ದಾರೆ. ಇದಕ್ಕೆ ಮಹಿಳೆಯರು ಇವತ್ತು ಅಥವಾ ನಾಳೆ ಸಂಘದ ಮಹಿಳೆಯರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಸಾಲ ವಸೂಲಿಗೆ ಬಂದವರ ಮೇಲೆ ಹಲ್ಲೆ
ಬ್ಯಾಂಕ್ ಗಳು ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವುದು ಮತ್ತು ವಸೂಲಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಕೋಲಾರದಲ್ಲಿ ಮಹಿಳಾ ಸಂಘಕ್ಕೆ ಸಾಲ ನೀಡಿದ್ದನ್ನು ವಸೂಲಿ ಮಾಡಲು ಬಂದ DCC ಬ್ಯಾಂಕ್ ಸಿಬ್ಬಂದಿಯ ಬೈಕನ್ನು ಸುಟ್ಟುಹಾಕುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮೂಲಬಾಗಿಲು ತಾಲೂಕಿನ ಬಿಸ್ನಹಳ್ಳಿ ಗ್ರಾಮದಲ್ಲಿ ಕಳೆದವಾರ ಈ ಘಟನೆ ನಡೆದಿದೆ. ಕೋಲಾರದ ಜಿಲ್ಲೆಯ ಸ್ತ್ರೀಶಕ್ತಿ ಸಂಘದ ಮಹಿಳೆಯರು ಗೋಕುಂಟೆ ಎಂಬ ಸೊಸೈಟಿಯಲ್ಲಿ ಸಾಲ ಪಡೆದಿದ್ದರು. ಸೊಸೈಟಿ ಸಿಬ್ಬಂದಿ ಜೋಸೆಪ್ ಎನ್ನುವವರು ಸಾಲ ವಸೂಲಿಗೆಂದು ಬಂದಾಗ ಮಹಿಳೆಯರು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಜೊತೆಗೆ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಮುಖ್ಯಮಂತ್ರಿ ಮಹಿಳಾ ಸಂಘದ ಸಾಲ ಮನ್ನಾ ಮಾಡಲಿ
ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮಾನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದ್ದರಿಂದ ನಾವು ಸಾಲವನ್ನು ಮರುಪಾವತಿ ಮಾಡುವುದಿಲ್ಲ ಈ ಮೂಲಕ ನೀವು ಹೇಳಿದಂತೆ ಈ ಮಹಿಳಾ ಸಂಘಗಳ ಸಾಲವನ್ನು ಮನ್ನಾ ಮಾಡಬೇಕು. ದಿನದಿಂದ ದಿನಕ್ಕೆ ಈ ಸಾಲಮನ್ನಾದ ವಿಚಾರದ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿದೆ. ಈ ಸಂಘಗಳ ಸಾಲ ವಸೂಲಿ ತೀವ್ರ ವಿಕೋಪದ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗ ಸಿದ್ದರಾಮಯ್ಯನವರೇ ಮುಂದಿನ ವರ್ಷ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇತರೆ ವಿಷಯಗಳು
ಚಿಕನ್ ದರದಲ್ಲಿ ಮತ್ತೆ ಭಾರೀ ಹೆಚ್ಚಳ! ಕೋಳಿ ಬೆಲೆ ನೋಡಿ ಕಂಗಾಲಾದ ಮಾಂಸ ಪ್ರಿಯರು
ಗೃಹಲಕ್ಷ್ಮಿಯರಿಗೆ ರೆಡಿಯಾಯ್ತು ಹೊಸ ಆ್ಯಪ್; ಜೂನ್ 28 ರಂದು ಸಂಪುಟ ಸಭೆಯಲ್ಲಿ ಚರ್ಚಿಸಿ ಆ್ಯಪ್ ಬಿಡುಗಡೆಗೆ ಸಜ್ಜು