ಹಲೋ ಸ್ನೇಹಿತರೇ, ಈ ಲೇಖನದಲ್ಲಿ SBI Public Provident Fund ಅಕೌಂಟ್ ನಲ್ಲಿ ಬಡ್ಡಿ ದರ ಎಷ್ಟಿದೆ, ನಾವು ಹೇಗೆ ಅಕೌಂಟ್ ಓಪನ್ ಮಾಡಿಕೊಳ್ಳಬೇಕು ಹಾಗೂ ಅಕೌಂಟ್ ಓಪನ್ ಮಾಡಿಕೊಳ್ಳಲು ವಯೋಮಿತಿ ಎಷ್ಟಿರಬೇಕು ಮತ್ತು ಕನಿಷ್ಟ ಹಾಗೂ ಗರಿಷ್ಟ ಎಷ್ಟು ಹಣವನ್ನು ವಿನಿಯೋಗಿಸಬೇಕು. ಮೆಚ್ಯೂರಿಟಿ ಅವಧಿ ಎಷ್ಟಿರುತ್ತದೆ. ಹಾಗೇ ಈ ಅಕೌಂಟ್‌ಗೆ ಹೇಗೆ ಅಪ್ಲೈ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ.

ನಾವು ಬ್ಯಾಂಕ್ ನಲ್ಲಿ ಹಣವನ್ನು ಉಳಿತಾಯ ಮಾಡುವ ಮೂಲ ಉದ್ದೇಶ ನಮ್ಮ ಮುಂದಿನ ಭವಿಷ್ಯಉತ್ತಮವಾಗಿರಲು ಸಾಧ್ಯವಾಗಿರಲಿ ಎಂಬ ಕಾರಣಕ್ಕೆ ನಾವು ಇಂದು ಹಲವು ಬ್ಯಾಂಕ್ ಗಳಲ್ಲಿ ಸೇವಿಂಗ್ಸ್ ಅನ್ನು ಮಾಡುತ್ತೇವೆ. ಆದರೆ ನಾವು ಹೇಗೆ ಮತ್ತು ಯಾವ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡುತ್ತಿದ್ದೇವೆಂಬುದು ಮುಖ್ಯವಾಗುತ್ತದೆ. ಇಂದು ನಾವು Public Provident Fund ಅನ್ನು ಹೂಡಿಕೆ ಮಾಡಲು ಸುಲಭ ಹಾಗೂ ಉತ್ತಮವಾದ ಒಂದು ಬ್ಯಾಂಕ್ ಬಗ್ಗೆ ತಿಳಿಸುತ್ತೇವೆ. ಉಳಿತಾಯವು ಖರ್ಚು ಮಾಡಿದ ನಂತರ ಉಳಿದಿರುವ ಹಣವನ್ನು ಒಳಗೊಂಡಿರುತ್ತದೆ. ನಿವೃತ್ತಿ, ಮಗುವಿನ ಕಾಲೇಜು ಶಿಕ್ಷಣ, ಮನೆ ಅಥವಾ ಕಾರಿಗೆ ಡೌನ್ ಪಾವತಿ, ರಜೆ, ಅಥವಾ ಹಲವಾರು ಇತರ ಉದಾಹರಣೆಗಳಂತಹ ವಿವಿಧ ಜೀವನ ಗುರಿಗಳು ಅಥವಾ ಆಕಾಂಕ್ಷೆಗಳಿಗಾಗಿ ಜನರು ಉಳಿಸಬಹುದಾದ ಹಣ. ಉಳಿತಾಯವನ್ನು ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ ಮೀಸಲಿಡಬಹುದು.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
SBI Public Provident Fund ಅಕೌಂಟ್ ನಲ್ಲಿ ಏಕೆ ಹಣವನ್ನು Invest ಮಾಡಬೇಕು?
- SBI Public Provident Fund ಪ್ರತಿಯೊಬ್ಬರಿಗೂ ಉಪಯೋಗವಾಗುವಂತಹ ಯೋಜನೆಯಾಗಿದೆ.
- ಈ ಯೋಜನೆಯು ಸರ್ಕಾರದ ಯೋಜನೆಯಾಗಿದೆ.
- ದೀರ್ಘಾವಧಿಯ ಹೂಡಿಕೆ ಆಯ್ಕೆ ಆಗಿದೆ.
- ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ 100% ಸುರಕ್ಷಿತವಾಗಿರುತ್ತದೆ. (Safe)
- ಇದರಲ್ಲಿ ಬರುವ Intrest Ammont ಹಾಗೂ Returns Ammount Tax free ಆಗಿರುತ್ತದೆ.
- ಈ ಯೋಜನೆಯಲ್ಲಿ ಲೋನ್ ಗೆ ಅವಕಾಶವಿದೆ. ಅಂದರೆ ನೀವು ಅಕೌಂಟ್ ತೆರೆದ 3 ವರ್ಷಗಳ ನಂತರ ಲೋನ್ ತೆಗೆದುಕೊಳ್ಳಬಹುದು.
ಈ ಯೋಜನೆಯಲ್ಲಿ ಬಡ್ಡಿದರ ಎಷ್ಟಿದೆ ಅಂದರೆ 7.1% ಇದೆ. ಈ ಯೋಜನೆಯಲ್ಲಿ ಕನಿಷ್ಠ 500 ರೂಗಳನ್ನು ಹೂಡಿಕೆ ಮಾಡಬೇಕು. ಗರಿಷ್ಟ ಮಟ್ಟದಲ್ಲಿ ಹೂಡಿಕೆ ಮಾಡುವುದಾದರೆ ಒಂದು ವರ್ಷಕ್ಕೆ 1,50,000 ರೂಪಾಯಿಗಳು ಹೂಡಿಕೆಯನ್ನು ಮಾಡಬೇಕು. (ನೀವು ತಿಂಗಳಿಗೆ 500, 1000 ಅಥವಾ 2000 ಹೂಡಿಕೆಯನ್ನ ಮಾಡಬಹುದು ಅಥವಾ ಒಂದೇಬಾರಿ 1 ಲಕ್ಷದ 50 ಸಾವಿರ ಹಣವನ್ನು ಡೆಪೋಸಿಟ್ ಮಾಡಬಹುದು)
ದಾಖಲೆಗಳು:
- Public Provident Fund (PPF) ಫಾರಂ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ನಾಮಿನಿದಾರರ ಡೀಟೇಲ್ಸ್
- Savings Account ಡೀಟೇಲ್ಸ್
- ಫೋಟೋ
- ಹಣ ಅಥವಾ ಚೆಕ್ (ನಿಮ್ಮ ಅನುಕೂಲಕ್ಕೆ ತಕ್ಕಂತೆ)
SBI Public Provident Fund ಅಕೌಂಟ್ ಲಕ್ಷಣಗಳು:
- ಈ ಅಕೌಂಟ್ ಹೊಂದಲು ಯಾವುದೇ ವಯೋಮಿತಿ ಇರುವುದಿಲ್ಲ.
- ಒಬ್ಬ ವ್ಯಕ್ತಿಗೆ ಒಂದೇ ಬಾರಿ PPF ಅಕೌಂಟ್ ಹೊಂದಲು ಅವಕಾಶ ಇರುತ್ತದೆ.
- ಈ ಯೋಜನೆಯ ಅವಧಿ 15 ವರ್ಷಗಳು ಇರುತ್ತದೆ.
- ಆದರೆ 5 ವರ್ಷ ಹೆಚ್ಚಿಗೆ ಇನ್ವೆಸ್ಟ ಮೆಂಟ್ ಮಾಡಲು ಅವಕಾಶ ಇರುತ್ತದೆ.
- ಈ PPF ಅಕೌಂಟ್ ನಲ್ಲಿ ಹೂಡಿಕೆ ಮಾಡಿದ 5 ವರ್ಷಗಳ ನಂತರ 50% ಹಣವನ್ನು ವಾಪಸ್ ಪಡೆದುಕೊಳ್ಳಬಹುದು.
- ಈ PPF Account Holderಗೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಂಬಂಧ ಪಟ್ಟ ದಾಖಲೆಗಳನ್ನು ತೋರಿಸಿ PPF ಅಕೌಂಟ್ ಅನ್ನು ಮುಚ್ಚ ಬಹುದು.
- PPF ಅಕೌಂಟ್ ನಲ್ಲಿ ಎಜುಕೇಶನ್ ಕಾರಣವನ್ನು ತೋರಿಸಿ PPF ಖಾತೆಯನ್ನು ಮುಚ್ಚಬಹುದು.
- ಮಕ್ಕಳ ಮದುವೆಯಲ್ಲಿಯೂ ಸಂಬಂಧಪಟ್ಟ ಕಾರಣವನ್ನುನೀಡಿ ಅಕೌಂಟ್ ಮುಚ್ಚಬಹುದು.
ಇದು ದೀರ್ಘಾವಧಿ ಯೋಜನೆಯಾಗಿರುವುದರಿಂದ ಅಕೌಂಟ್ ಅನ್ನು ಅರ್ಧಕ್ಕೆ ಮುಚ್ಚುವುದರಿಂದ 1 % ಬಡ್ಡಿದರವನ್ನು ಕಡಿತಗೊಳಿಸಲಾಗುತ್ತದೆ. (7.1% – 1% = 6.1% ) 6.1 % ಬಡ್ಡಿದರ ನಿಮಗೆ ಸಿಗುತ್ತದೆ.
ಉದಾಹರಣೆ:
ಪ್ರತಿ ತಿಂಗಳು 500 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿ 15 ವರ್ಷ ಆಗಿರುತ್ತದೆ. 15 ವರ್ಷ ಪೂರ್ತಿ ಆದ ನಂತರ ನಮಗೆ ನಾವು ಹೂಡಿಕೆ ಮಾಡಿದ 90,000 ರೂಪಾಯಿ ಅದಕ್ಕೆ ಬಡ್ಡಿ 67,784 ರೂಪಾಯಿ ಬರುತ್ತದೆ. ಮೆಚ್ಯೂರಿಟಿ ಹಣ 1,57,784 ರೂಪಾಯಿ ಬರುತ್ತದೆ.

ಪ್ರತಿ ತಿಂಗಳು 5,000 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿ 15 ವರ್ಷ ಆಗಿರುತ್ತದೆ. 15 ವರ್ಷ ಪೂರ್ತಿ ಆದ ನಂತರ ನಮಗೆ ನಾವು ಹೂಡಿಕೆ ಮಾಡಿದ 9,00,000 ರೂಪಾಯಿ ಅದಕ್ಕೆ ಬಡ್ಡಿ 6,77,839ರೂಪಾಯಿ ಬರುತ್ತದೆ. ಮೆಚ್ಯೂರಿಟಿ ಹಣ 15,77,839 ರೂಪಾಯಿ ಬರುತ್ತದೆ.

ಪ್ರತಿ ತಿಂಗಳು 15,000 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿ 15 ವರ್ಷ ಆಗಿರುತ್ತದೆ. 15 ವರ್ಷ ಪೂರ್ತಿ ಆದ ನಂತರ ನಮಗೆ ನಾವು ಹೂಡಿಕೆ ಮಾಡಿದ 22,50,000 ರೂಪಾಯಿ ಅದಕ್ಕೆ ಬಡ್ಡಿ 18,18,209ರೂಪಾಯಿ ಬರುತ್ತದೆ. ಮೆಚ್ಯೂರಿಟಿ ಹಣ 40,68,209 ರೂಪಾಯಿ ಬರುತ್ತದೆ.

ನೀವು ಪ್ರತಿ ತಿಂಗಳು PPF ಅಮೌಂಟ್ ಡೆಪಾಸಿಟ್ ಮಾಡುವುದಾದರೆ ಆಯಾ ತಿಂಗಳಿನ 5ನೆ ತಾರೀಕಿನ ಒಳಗೆ ಡೆಪಾಸಿಟ್ ಮಾಡಬೇಕು. ಇಲ್ಲಾ ಆ ತಿಂಗಳಿನ Interesti ಬರುವುದಿಲ್ಲ, ವರ್ಷಕ್ಕೊಮ್ಮೆ PPF ಅಮೌಂಟ್ ಕಟ್ಟುವುದಾದರೆ ವರ್ಷದ ಏಪ್ರಿಲ್ 05 ರೊಳಗೆ ಡೆಪಾಸಿಟ್ ಮಾಡಬೇಕು. ಮತ್ತು ಈ ಯೋಜನೆಯಲ್ಲಿ Nominee Facility ಇದೆ. ಏಕೆಂದರೆ PPF Account Holder ಮರಣ ಹೊಂದಿದರೆ ಆ ಅಮೌಂಟ್ ಅನ್ನು ನಾಮಿನಿದಾರರಿಗೆ ಕೊಡುತ್ತಾರೆ.
PPF ಅಕೌಂಟ್ ಅನ್ನು ಯಾವ ಬ್ಯಾಂಕ್ ನಲ್ಲಿ ಹೊಂದಬಹುದು?
- SBI Bank
- Nationalized Banks
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರ ವಿಷಯಗಳು :
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ.