ಹಲೋ ಪ್ರೆಂಡ್ಸ್, ಇಂದಿನ ನಮ್ಮ ಲೇಖನದಲ್ಲಿ ಈ ವರ್ಷ ಮಳೆಯ ಪ್ರಮಾಣದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ. ಕರ್ನಾಟಕದಲ್ಲಿ ಜನರು ಮಳೆಯ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಎಷ್ಷು ಮಳೆಯಾಗಲಿದೆ? ಪ್ರಸ್ತುತ ಯಾವ ಯಾವ ಪ್ರದೇಶಗಳಲ್ಲಿ ಎಷ್ಟು ಪ್ರಮಾಣ ಮಳೆ ಕಡಿಮೆಯಾಗಿದೆ? ಮಳೆ ಹೆಚ್ಚಾಗಲಿದೆಯಾ? ಮತ್ತಷ್ಟು ಕಡಿಮೆಯಾಗಲಿದೆಯಾ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ಜೂನ್ ನಲ್ಲಿ ವಾಡಿಕೆಗಿಂತ 61 % ಮಳೆ ಕೊರತೆ ಆದರೆ ಕೇವಲ ಈಗ 63 ಮೀ ಮೀ ಮಳೆ ಯಾಗಿದೆ. ಜೂನ್ 1 ರಿಂದ 25 ರವರೆಗೆ 160 ಮೀ.ಮೀ ಮಳೆಯಾಗಬೇಕಿತ್ತು. ಮಳೆನಾಡು ಕರಾವಳಿ ಭಾಗ ಉತ್ತರ ಒಳನಾಡು ಭಾಗದಲ್ಲಿ ತೀವ್ರ ಕೊರತೆ ಉಂಟಾಗಿದೆ.
ಉತ್ತರ ಒಳನಾಡು ವಾಡಿಕೆ ಮಳೆ 85 ಮೀ ಮೀ ಈಗಿನ ಮಳೆ ಪ್ರಮಾಣ 36 ಮೀ ಮೀ. ಈ ಪರಿಸ್ಥಿತಿ ಯಲ್ಲಿ ರೈತರಿಗೆ ಬೆಳೆ ಬೆಳೆಯೋದು ಕಷ್ಟವಾಗ್ತಾ ಹೋಗುತ್ತದೆ. ನೀರಾವರಿ ಭಾಗಗಳಲ್ಲಿ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ ಆದರೆ ಮಳೆಯನ್ನೇ ಅವಲಂಭಿಸಿರುವ ಪ್ರದೇಶಗಳಲ್ಲಿ ಮಳೆ ತುಂಬಾ ಮುಖ್ಯವಾಗಲಿದೆ. ಮಲೆನಾಡಿನಲ್ಲಿ ವಾಡಿಕೆಯಂತೆ ಮಳೆ 281 ಮೀ ಮೀ ಮಳೆಯಾಗ್ತಾ ಇತ್ತು. ಆದರೆ ಈಗ ಕೇವಲ 66 ಮೀ ಮೀ ಮಳೆ ಪ್ರಮಾಣ ಕಂಡುಬರುತ್ತಿದೆ.
ಕರಾವಳಿ ವಾಡಿಕೆ ಮಳೆ 651 ಮೀ ಮೀ ಆದರೆ ಈಗಿನ ಮಳೆ ಪ್ರಮಾಣ 224 ಮೀ ಮೀ. ಹಾಗೂ ದಕ್ಷಿಣ ಒಳನಾಡು ವಾಡಿಕೆ ಮಳೆ 59 ಮೀ ಮೀ ಆದರೆ ಈಗಿನ ಮಳೆ ಪ್ರಮಾಣ 46 ಮೀ ಮೀ. ಆದರೆ ಹವಾಮಾನ ಇಲಾಖೆ ಜುಲೈ ತಿಂಗಳಿನಲ್ಲಿ ಮಳೆ ಚುರುಕುಗೊಳ್ಳು ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿ ನೀಡಿದೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಜೂನ್ 27 ರಂದು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಗಾಳಿಯ ವೇಗ ಗಂಟೆಗೆ 45-55 ಕಿಮೀ ತಲುಪುವ ನಿರೀಕ್ಷೆಯಿರುವುದರಿಂದ ಈ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜೂನ್ 27 ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 28 ಮತ್ತು 29 ರಂದು ಎಲ್ಲಾ ಮೂರು ಕರಾವಳಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಜೂನ್ 30 ರ ನಂತರ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಂದು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು ಮತ್ತು ಕರಾವಳಿಯ ಮೂರೂ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು:
Breaking News: ಜುಲೈ 7 ರಂದು ಸಿದ್ದರಾಮಯ್ಯನವರಿಂದ ರಾಜ್ಯ ಬಜೆಟ್ ಮಂಡನೆ, ಪಂಚ ಯೋಜನೆಗಳ ಬದಲಾವಣೆ ಸಾಧ್ಯತೆ