ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಮದುವೆ ಸಹಾಯಧನವನ್ನು ನೀಡಲಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯ ವತಿಯಿಂದ Labour Card ಹೊಂದಿರುವವರಿಗೆ ಗೃಹ ಲಕ್ಷ್ಮಿ ಬಾಂಡ್ ನ ಅಡಿಯಲ್ಲಿ ಮದುವೆ ಸಹಾಯಧನವನ್ನು ನೀಡಲಾಗುತ್ತಿದೆ. ನೀವು ಸಹ ಈ ಕಾರ್ಡ್ ಹೊಂದಿದ್ದು ಇದರ ಲಾಭವನ್ನು ಪಡೆಯಲು ಬಯಸಿದರೆ ನಮ್ಮ ಈ ಲೇಖನವನ್ನು ಕೊನೆವರೆಗೂ ಓದಿ. ಇದರಲ್ಲಿ ಈ ಸಹಾಯಧನವನ್ನು ಪಡೆಯಲು ಬೇಕಾಗುವ ದಾಖಲೆಗಳು, ಅರ್ಹತೆ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುವುದರ ಬಗ್ಗೆ ಸಂಪೂರ್ಣ ವಿವರ ತಿಳಿಸಿದ್ದೇವೆ.

ಇಲಾಖೆಯ ವತಿಯಿಂದ ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್)
ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕರ ಕಲ್ಯಾಣ ಇಲಾಖೆಯ ವತಿಯಿಂದ ಈ ಕಾರ್ಡ್ ಅನ್ನು ಜಾರಿಗೆ ತರಲಾಗಿದೆ. ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಅದೆಷ್ಟೋ ಯೋಜನೆಗಳ ಅಡಿಯಿಂದ ಪ್ರಯೋಜನ ದೊರೆಯುತ್ತಿದೆ. ಉಳಿದ ಯೋಜನೆಗಳಂತೆ ಗೃಹ ಲಕ್ಷ್ಮಿ ಬಾಂಡ್ ಯೋಜನೆಯು ಹೊಸದಾಗಿ ಸೇರ್ಪಡೆಯಾಗಿದೆ, ಈ ಯೋಜನೆಯ ಅಡಿಯಲ್ಲಿ ಲೇಬರ್ ಕಾರ್ಡ್ ಹೊಂದಿದ ಕುಟುಂಬದವರಿಗೆ 60,000 ಮದುವೆ ಸಹಾಯಧನವನ್ನು ನೀಡಲಾಗುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಮದುವೆ ಅಥವಾ ಅವರ ಅವಲಂಭಿತರ ಮದುವೆಗೆ ನೀಡುವ ಸಹಾಯ ಧನ ಇದಾಗಿದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು
- ಕಟ್ಟಡ ಕಾರ್ಮಿಕನು ನೋಂದಣಿಯಾಗಿ 1 ವರ್ಷದ ಸದಸ್ಯತ್ವವನ್ನು ಪೂರೈಸಿರಬೇಕು.
- ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಈ ಸಹಾಯಧನ ಪಡೆಯಲು ಅರ್ಹರು.
- ನೋಂದಾಯಿತ ಕಟ್ಟಡ ಕಾರ್ಮಿಕನ ಮಗ / ಮಗಳು ಮದುವೆಯ ಸಹಾಯಧನ ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
- ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
- ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿಯನ್ನುಸಲ್ಲಿಸಬೇಕು.
ಬೇಕಾಗುವ ದಾಖಲೆಗಳು :
- ಲೇಬರ್ ಕಾರ್ಡ್ ಮೂಲ ಗುರುತಿನ ಚೀಟಿ
- ಉದ್ಯೋಗ ದೃಡೀಕರಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ
- ಮದುವೆಯ ಕಾರ್ಡ್ (ಮದುವೆ ಹೊರ ರಾಜ್ಯದಲ್ಲಿ ಜರುಗಿದ್ದದೆ ಅಫಿಡೆವಿಟ್ ಸಲ್ಲಿಸಬೇಕು)
- ರೇಷನ್ ಕಾರ್ಡ್
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿಯನ್ನು ಅಭ್ಯರ್ಥಿಗಳು ಸೇವಾ ಸಿಂಧುವಿನ ಮೂಲಕ ತಾವೇ ಸಲ್ಲಿಸಬಹುದು ಅಥವಾ ಹತ್ತಿರದ ಕಂಪ್ಯೂಟರ್ ಸೆಂಟರ್ / ನಿಮ್ಮ ಹತ್ತಿರದ ಲೇಬರ್ ಕಾರ್ಡ್ ಕಛೇರಿಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.
- ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಸ್ವೀಕೃತಿಯನ್ನು ನೀಡಲಾಗುತ್ತದೆ.
- ಆ ಸ್ವೀಕೃತಿಯನ್ನು ನೀವು ನಿಮ್ಮ ತಾಲೂಕಿನ ಕಾರ್ಮಿಕ ಕಛೇರಿಗೆ ತೆರಳಿ ಅರ್ಜಿಯ ಜೊತೆಗೆ ದಾಖಲೆಗಳನ್ನು ಸಲ್ಲಿಸಬೇಕು.
- ನಂತರ ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ನಿಮ್ಮ ಅರ್ಜಿ ಪರಿಶೀಲನೆ ಮತ್ತು ಅನುಮೋದನೆ ಆಗುತ್ತದೆ.