ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ಹೊಸ ಸರ್ಕಾರದ ಬೆಲೆ ಏರಿಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಬದುಕುವುದೇ ಕಷ್ಟಕರವಾಗಿದೆ. ಇದೀಗ ಮಾಂಸದ ಜೊತೆ ತರಕಾರಿ, ದಿನಸಿ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವನ್ನು ಮಾಡಲಾಗಿದೆ. ಈ ಬದಲಾದ ಹೊಸ ದರಗಳನ್ನು ತಿಳಿಯಲು ನಮ್ಮ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

ರಾಜ್ಯದಲ್ಲಿ ಚಿಕನ್ ದರವು ಹಲವು ಜಿಲ್ಲೆಗಳಲ್ಲಿ 300 ರೂಪಾಯಿಗಿಂತ ಜಾಸ್ತಿಯಾಗಿದೆ. ಇದರ ಜೊತೆಗೆ ಮೊಟ್ಟೆ ದರವು ಕೂಡ 5 ರೂ.ನಿಂದ 7 ರೂ.ಗೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಮೊಟ್ಟೆಯ ಉತ್ಪಾದನೆ ಕಡಿಮೆಯಾದ ಕಾರಣದಿಂದಾಗಿ ಕಳೆದ ತಿಂಗಳಿನಲ್ಲಿ ಬೆಲೆ 25% ರಷ್ಟು ಹೆಚ್ಚಾಗಿದೆ. ಬೇಸಿಗೆಯ ಬಿಸಿಲು ಕೋಳಿ ಉತ್ಪಾದನೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಕೋಳಿಯು ಬೆಸಿಗೆಯಲ್ಲಿ ಕಡಿಮೆ ಆಹಾರ ಮತ್ತು ಹೆಚ್ಚಿನ ನೀರನ್ನು ಸೇವಿಸುತ್ತವೆ. ಹೆಚ್ಚಿನ ಕೋಳಿಗಳು ಬೆವರುವುದಿಲ್ಲ ಇದರಿಂದಾಗಿ ಶಾಖವು ಅವುಗಳ ಗರಿಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಉತ್ಪಾದನೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಮೊದಲು ಒಂದು ಮೊಟ್ಟೆ 6.5 ರೂ.ಗೆ ಮಾರಾಟವಾಗುತ್ತಿದ್ದು, ಇದರ ಸಗಟು ದರ 5.65 ರೂ. ಇದೆ. ಕರ್ನಾಟಕದಲ್ಲಿ ಸುಮಾರು 1.60 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತಿದೆ, ಇದರಲ್ಲಿ ಶೇ.50ರಷ್ಟು ಬೆಂಗಳೂರಿನಲ್ಲೇ ಬಳಕೆಯಾಗುತ್ತಿದೆ. ಹಾಗೆಯೇ, ನಾಮಕ್ಕಲ್ (ತಮಿಳುನಾಡು), ಹೊಸಪೇಟೆ ಮತ್ತು ಹೈದರಾಬಾದ್‌ನಿಂದ ಮೊಟ್ಟೆಗಳನ್ನು ಸರಬರಾಜು ಮಾಡಲಾಗುತ್ತದೆ. ತಾಪಮಾನದಲ್ಲಿನ ಏರಿಳಿತಗಳಿಂದಾಗಿ ಉತ್ಪಾದನೆಯಲ್ಲಿ ಹೆಚ್ಚಿನ ಕುಸಿತ ಕಂಡುಬಂದಿದೆ ಎಂದು ಬೆಂಗಳೂರು ವಲಯದ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಆರ್.ಸಾಯಿನಾಥ್ ಅವರು ತಿಳಿಸಿದ್ದಾರೆ.
ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಆದರೆ, ಈ ವರ್ಷ ಕುಸಿತ ಹೆಚ್ಚಿನ ಪ್ರಮಾಣದಲ್ಲಾಗಿದೆ. ಒಂದು ದಿನಕ್ಕೆ ಸುಮಾರು 4.25 ಲಕ್ಷ ಮೊಟ್ಟೆ ಮಾರಾಟವಾಗುತ್ತಿತ್ತು ಆದರೆ ಈಗ ಕೇವಲ 4 ಲಕ್ಷ ಮೊಟ್ಟೆ ಮಾತ್ರ ಮಾರಾಟವಾಗುತ್ತಿದೆ ಎಂದು ಮೊಟ್ಟೆ ಪೂರೈಕೆದಾರರು ತಿಳಿಸಿದ್ದಾರೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ನಿಂಬೆ ಹಣ್ಣಿನ ಬೆಲೆ
ನಿಂಬೆ ಹಣ್ಣಿನ ಬೆಲೆಯು ಸಹ ಗಗನಕ್ಕೇರಿದೆ. 1 ಸಾವಿರ ನಿಂಬೆಹಣ್ಣಿನ ಸಗಟು ಬೆಲೆ ಈಗ 4,000 ರೂ.ನಿಂದ 5,000 ರೂ.ವರೆಗೆ ಇದೆ ಆದರೆ ಕೆಲವು ತಿಂಗಳ ಹಿಂದೆ 2,500 ರೂ.ನಿಂದ 3,000 ರೂ ಇತ್ತು. ನಿಂಬೆಹಣ್ಣಿನ ಚಿಲ್ಲರೆ ದರವೂ ಏರಿಕೆಯಾಗಿದ್ದು ಈಗ ರಾಜ್ಯದ ಕೆಲವೆಡೆ ಪ್ರತಿ ನಿಂಬೆಹಣ್ಣು 7 ರಿಂದ 8 ರೂ.ಗೆ ಮಾರಾಟವಾಗುತ್ತಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ 10 ರೂ.ವರೆಗೂ ತಲುಪಿದೆ. ಬೇಸಿಗೆಯಲ್ಲಿ ನಿಂಬೆಹಣ್ಣಿನ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಗುಲಾಬಿ ಬೆಲೆ ಕುಸಿತ
ಭಾರತದಲ್ಲಿ ಗುಲಾಬಿಗಳ ಬೆಲೆಯಲ್ಲಿ ಕುಸಿತ ಕಂಡಿದೆ. ಪನ್ನೀರ್ ಗುಲಾಬಿಗಳನ್ನು ಈಗ ರೈತರು ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 10 ರಿಂದ 20 ರೂ.ಗೆ ಮಾರಾಟ ಮಾಡುತ್ತಾರೆ. ಇದರಿಂದ ಹೂ ಕೀಳುವ ಕೂಲಿ ಹಣ ಮಾರಾಟದ ಬೆಲೆಯಿಂದ ಜಾಸ್ತಿಯಾಗಲಿದೆ ಎಂಬ ಭಾವನೆಯಿಂದ ಹಲವಾರು ರೈತರು ಹೂ ಕೀಳುವುದನ್ನು ನಿಲ್ಲಿಸಿದ್ದಾರೆ.
ಇತರೆ ವಿಷಯಗಳು
ಪಿಎಂ ಕಿಸಾನ್ ಯೋಜನೆ: 14ನೇ ಕಂತು ಖಾತೆಗೆ ಬರಲು ಈ 4 ಬದಲಾವಣೆ ಅವಶ್ಯಕ! ಇಲ್ಲಿಂದ ಸಂಪೂರ್ಣ ಮಾಹಿತಿ ತಿಳಿಯಿರಿ