Karnataka Govt Jobs

DC ಆಫೀಸ್ ನೇಮಕಾತಿ 2022 | DC Office Recruitment 2022

Published

on

DC ಆಫೀಸ್ ನೇಮಕಾತಿ 2022, DC Office Recruitment 2022 Gadag DC Office Recruitment 2022 DC Office Karnataka

ಗದಗ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಕನಿಷ್ಠ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DC Office Recruitment 2022

DC Office Recruitment 2022
DC Office Recruitment 2022

ಗದಗ DC ಆಫೀಸ್ ನೇಮಕಾತಿ 2022 ಪ್ರಮುಖ ಅಂಶಗಳು:

ಇಲಾಖೆಯ ಹೆಸರುಗದಗ ಡಿಸಿ ಕಚೇರಿ
ಒಟ್ಟು ಖಾಲಿ ಹುದ್ದೆಗಳು58
ಪೋಸ್ಟ್ ಹೆಸರುಲೋಡರ್ ಮತ್ತು ಕ್ಲೀನರ್
ಉದ್ಯೋಗ ಸ್ಥಳಗದಗ, ಕರ್ನಾಟಕ
ಅಧಿಕೃತ ಜಾಲತಾಣhttps://gadag.nic.in/

ಕರ್ತವ್ಯ ಸ್ಥಳ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಗದಗ ಜಿಲ್ಲೆಯ ಗದಗ-ಬೆಟಗೇರಿ ನಗರಸಭೆ, ಗಜೇಂದ್ರಗಡ ಪುರಸಭೆ, ಲಕ್ಷ್ಮೇಶ್ವರ ಪುರಸಭೆ, ಮುಂಡರಗಿ ಪುರಸಭೆ, ನರಗುಂದ ಪುರಸಭೆ, ರೋಣ ಪುರಸಭೆ, ಮುಳಗುಂದ ಪಟ್ಟಣ ಪಂಚಾಯತ, ನರೇಗಲ್ಲ ಪಟ್ಟಣ ಪಂಚಾಯತ ಹಾಗೂ ಶಿರಹಟ್ಟಿ ಪಟ್ಟಣ ಪಂಚಾಯತಗಳಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿ ಇರುವ ಹದ್ದೆಗಳ ಸಂಖ್ಯೆ:

ಒಟ್ಟು 58 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಲೋಡರ್47
ಕ್ಲೀನರ್11

ಕನಿಷ್ಟ ಅರ್ಹತೆ:

ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ಗೊತ್ತಿರಬೇಕು. ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೋಡರ್ ಅಥವಾ ಕ್ಲೀನರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ/ ದಿನಗೂಲಿ/ ಗುತ್ತಿಗೆ/ ಸಮಾನ ಕೆಲಸಕ್ಕೆ ಸಮಾನ ವೇತನ/ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಾನ:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 55 ವರ್ಷ ನಿಗದಿಪಡಿಸಲಾಗಿದೆ.

ವೇತನ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 28,950 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ

ಅರ್ಜಿ ಸಲ್ಲಿಸಲು ಕ್ರಮಗಳು:

• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಕಛೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ಕೊನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಿ ಕಛೇರಿಗೆ ಸಲ್ಲಿಸಬೇಕು.

ಅರ್ಜಿ ನಮೂನೆ ಪಡೆಯುವ ಸ್ಥಳ:

ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ : 123, 1ನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ಗದಗ ಅಥವಾ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ:

ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ, ಕೊಠಡಿ ಸಂಖ್ಯೆ 123, 1ನೇ ಮಹಡಿ

ಅರ್ಜಿ ನಮೂನೆ: 

ನೀವು ಅರ್ಜಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ: 123, 1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ, ಗದಗ ಇಲ್ಲಿ ಪಡೆಯಬಹುದು ಅಥವಾ ಸಂಬಂಧಪಟ್ಟ ನಗರ ಸ್ಥಳೀಯ ಪುರಸಭೆಗಳಿಂದ ಪಡೆಯಬಹುದು.

ಅರ್ಜಿ ಶುಲ್ಕದ ವಿವರ:

• ಪ.ಜಾತಿ, ಪ.ಪಂ, ಪ್ರವರ್ಗ 1 ಹಾಗೂ ಮಹಿಳಾ ಅಭ್ಯರ್ಥಿಗಳು – ರೂ. 100
• ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 300
• ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 50

ಶುಲ್ಕ ಮಾವತಿಸುವ ವಿಧಾನ:

ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಅರ್ಜಿಯೊಂದಿಗೆ ಸಲ್ಲಿಸಬೇಕು (ಡಿಡಿ ಯನ್ನು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಗದಗ ಇವರ ಹೆಸರಿಗೆ ತೆಗೆಯುವುದು

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 10, 2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 28, 2022

ಇತರೆ ವಿಷಯಗಳು:

ಪ್ರಸಾರ ಭಾರತಿ ನೇಮಕಾತಿ 2022

ಜಿಲ್ಲಾ ಪಂಚಾಯತ್ ನೇಮಕಾತಿ 2022

CISF 787 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ 2022

ಕರ್ನಾಟಕ ಬ್ಯಾಂಕ್ ಕಾರ್ಯದರ್ಶಿ ಹುದ್ದೆ ನೇಮಕಾತಿ 2022

ಗದಗ ಡಿಸಿ ಕಚೇರಿ ಅಧಿಸೂಚನೆ ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಅಧಿಕೃತ ಅಧಿಸೂಚನೆ ಪಿಡಿಎಫ್Click Here
ಅಧಿಕೃತ ವೆಬ್‌ಸೈಟ್gadag.nic.in

FAQ:

ಗದಗ ಡಿಸಿ ಕಚೇರಿ ನೇಮಕಾತಿಯಲ್ಲಿ ಖಾಲಿ ಇರುವ ಹದ್ದೆಗಳ ಸಂಖ್ಯೆ?

58

ಅರ್ಜಿ ಸಲ್ಲಿಸುವ ವಿಧಾನ?

ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ, ಕೊಠಡಿ ಸಂಖ್ಯೆ 123, 1ನೇ ಮಹಡ.

ಗದಗ ಡಿಸಿ ಕಚೇರಿ ನೇಮಕಾತಿಯ ಪೋಸ್ಟ್ ಹೆಸರು?

ಲೋಡರ್ ಮತ್ತು ಕ್ಲೀನರ್

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ