information

ಫ್ಲೈಓವರ್‌ನಿಂದ ಹಣದ ಮಳೆ ಸುರಿಸಿದ ಅರುಣ್‌ ಕೋಟ್ಯಾಧಿಪತಿಯೆ? ದುಡ್ಡಿನ ಮಳೆ ಸುರಿಸಿದ ಆಂಕರ್‌ ಅರುಣ್‌ ಅವರ ಅಸಲಿ ಮುಖ!

Published

on

Anchor Arun Money Bangalore Money Rain Full Details Kannada

ದುಡ್ಡು ಸಿಗುತ್ತೆ ಅಂದ್ರೆ ಯಾರು ತಾನೇ ಬೇಡ ಅನ್ನಲ್ಲ ಹೇಳಿ, ಅದರಲ್ಲು ದುಡ್ಡಿನ ಮಳೆನೆ ಬಂದ್ರೆ ಯಾರಾದ್ರೂ ಬಿಡೋದುಂಟೆ? ಅಂತಹ ಒಂದು ವಿಷ್ಯ ಗೊತ್ತಾದ್ರೆ ಜನ ಎಲ್ಲೆಲ್ಲಿಂದನೋ ಜನ ಓಡೋಡಿ ಬರ್ತಾರೆ. ಅಂತಹದ್ದೆ ಒಂದು ಘಟನೆ ನಿನ್ನೆ ಬೆಳಿಗ್ಗೆ ಕೆ ಆರ್‌ ಪೇಟೆಯ ಫ್ಲೈ ಓವರ್‌ ಮೇಲೆ ನಡೆಯಿತು. ಅರುಣ್‌ ಎಂಬ ಒಬ್ಬ ವ್ಯಕ್ತಿ ಹಣದ ಮಳೇ ಸುರಿಸಿದ್ದಕ್ಕೆ ಫ್ಲೈ ಓವರ್‌ ಕೆಳಗೆ ಸಾಕಷ್ಟು ಜನರು ಒಟ್ಟಾದರು, ದುಡ್ಡನ್ನು ಆಯ್ದುಕೊಳ್ಳಲು ಮುಂದಾದರು.

Anchor Arun Money Bangalore Money Rain Full Details Kannada

Anchor Arun ಯಾರು ಈ ಅರುಣ್?

ಅರುಣ್‌ ಅವರು ಒಬ್ಬ ಈವೆಂಟ್‌ ಮ್ಯಾನೇಜರ್‌, ತಮ್ಮದೇ ಒಂದು ಸ್ವಂತ ಕಂಪನಿ ಹುಟ್ಟುಹಾಕಿ ಎಷ್ಟೊ ಜನರಿಗೆ ತಮ್ಮ ಕಂಪನಿಯಲ್ಲಿ ಕೆಲಸ ನೀಡಿದ್ದಾರೆ. ಇವರು GT Business (ಗ್ರೋ ಟುಗೆದರ್) ಎಂಬ ಒಂದು ಸಂಸ್ಥೆಯನ್ನು ಪ್ರಾರಂಭಿಸಿದರು, ತಾವು ಬೆಳೆಯಬೇಕು ಜೊತೆಗೆ ತಮ್ಮವರನ್ನು ಬೆಳೆಸಬೇಕು ಎಂಬುದು GT Business ನ ಉದ್ದೇಶವಾಗಿದೆ, ಪ್ರೀತಿ ವಿಶ್ವಾಸ ನಂಬಿಕೆಯೆ ಇದರ ಆಧಾರ. ಹೊಸತನವನ್ನು ಜನರಿಗೆ ನೀಡಬೇಕೆಂದು ಛಲ ತೊಟ್ಟಿರುವಂತಹ ಒಂದು ಜನಪರ ಸಂಸ್ಥೆಯಾಗಿದೆ GT Business. ಇವರು ಇಲ್ಲಿಯವರೆಗು ಮಾಡಿದ ಎಷ್ಟೋ ಒಳ್ಳೆಯ ಕೆಲಸಗಳನ್ನು ಕರ್ನಾಟಕದ ಮಾಧ್ಯಮಗಳು ಗುರುತಿಸಿಲ್ಲ, ಕೋವಿಡ್‌ ಸಮಯದಲ್ಲೂ ಇವರು ಮಾಡಿದ ಒಳ್ಳೆಯ ಕೆಲಸಗಳು ಸಾಕಷ್ಟಿವೆ.

ಅರುಣ್‌ ಅವರು ಒಬ್ಬ ಅದ್ಭುತ ಈವೆಂಟ್‌ ಮತ್ತು ಬಿಸಿನೆಸ್‌ ಪ್ಲಾನರ್. ಸಮಯದ ಬಗ್ಗೆ ಅದ್ಭುತವಾಗಿ ಚಿಂತನೆ ಮಾಡುವಂತಹ ವ್ಯಕ್ತಿ, ನನಗೆ ಕೇವಲ 24 ಗಂಟೆ ಮಾತ್ರ ಸಮಯವಿದೆ, ಈ 24 ಗಂಟೆಯಲ್ಲಿ ನಾನು ಏನು ಮಾಡಬಹುದು ಎಂಬ ವಿಷಯದ ಕುರಿತು ಸಾಕಷ್ಟು ಚಿಂತನೆ ಮಾಡುವ ವ್ಯಕ್ತಿ ಅರುಣ್.‌ ಸಮಯದ ಮಹತ್ವವನ್ನು ತುಂಬಾ ಆಳವಾಗಿ ಆಲೋಚಿಸುವ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದಾರೆ ಇವರು.

ಇವರು ಮಾಡಿರುವಂತಹ ಅದೆಷ್ಟೊ ಈವೆಂಟ್‌ ಪ್ಲಾನ್‌ಗಳನ್ನು ನೀವು ನೋಡಿರುತ್ತೀರಿ. ನೋಡಿದ್ದರೂ ಕೂಡ ಅದು ಅರುಣ್‌ ಅವರ ಪ್ಲಾನ್‌ಗಳು ಎಂಬುದು ಎಷ್ಟೊ ಜನಕ್ಕೆ ತಿಳಿದಿರಲಿಕ್ಕಿಲ್ಲ. ನಿನ್ನೆಯಿಂದ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಾಧ್ಯಮಗಳ‌ ಎಷ್ಟೋ ಈವೆಂಟ್ ಗಳನ್ನು ಪ್ಲಾನ್‌ ಮಾಡಿದ್ದು ಸಹ ಇದೇ ಅರುಣ್.‌ ಇವರು ಪ್ಲಾನ್‌ ಮಾಡಿರುವ ಈವೆಂಟ್ಸ್‌ಗಳು ಇಷ್ಟವಾಗದಿರುವ ಜನರೇ ಇಲ್ಲ, ಹೊಸ ವರ್ಷಕ್ಕು ಸಹ ಅದ್ಭುತವಾಗಿ ಈವೆಂಟ್ ಅನ್ನು ಆಯೋಜಿಸಿದ್ದರು ಅರುಣ್‌ ಅವರು.

ಕೋವಿಡ್‌ ಸಮಯದಲ್ಲಿ Anchor Arun Foundation ಸಂಸ್ಥೆಯ ಅಡಿಯಲ್ಲಿ ಸುಮಾರು 10ಸಾವಿರ ಬಡ ಜನರಿಗೆ ಉಚಿತವಾಗಿ ಊಟ ನೀರು ನೀಡಿ ಬಡ ಜನರ ಹೊಟ್ಟೆ ತುಂಬಿಸಿದ್ದರು ಅರುಣ್‌

ಕಂತೆ ಕಂತೆ ಹಣ ಎಸೆದಿದ್ದರ ಹಿಂದಿನ ಕಾರಣವೇನು ಗೊತ್ತಾ?

ಅರುಣ್‌ ಅವರು ಬಿಸಿನೆಸ್‌ ಕುರಿತು ಒಬ್ಬ ಅದ್ಭುತ ಚಿಂತಕರಗಿದ್ದಾರೆ, ನಿನ್ನೆ ಹಣ ಎಸೆದಿದ್ದರ ಹಿಂದೆ ಬಿಸಿನೆಸ್‌ ಕುರಿತು ಒಂದು ಬಲವಾದ ಕಾರಣ ಖಂಡಿತವಾಗಿಯು ಇದೆ. ಆದರೆ ಅದನ್ನು ಯೋಚಿಸುವ ಕೆಲಸಕ್ಕೆ ಹೋದವರು ತುಂಬಾನೇ ಕಡಿಮೆ ಮಂದಿ. ಅವರ ಕೊರಳಿಗೆ ಗಡಿಯಾರ ನೇತು ಹಾಕಿಕೊಂಡು ಮತ್ತೊಂದು ಕೈಚೀಲದಲ್ಲಿ ಹತ್ತು ರೂಪಾಯಿಗಳ ನೋಟಿನ ಕಂತೆಗಳನ್ನು ಇಟ್ಟುಕೊಂಡು ಫ್ಲೈಓವರ್‌ ಮೇಲಿನಿಂದ ಬಿಸಾಡಲು ಪ್ರಾರಂಭಿಸುತ್ತಾರೆ.

ಅವರ ಉದ್ದೇಶ ಇದ್ದಿದ್ದು ಜನಕ್ಕೆ ಸಮಯದ ಮಹತ್ವವನ್ನು ತಿಳಿಸಲು ಆಗಿರಲೂಬಹುದು. ಒಬ್ಬ ವ್ಯಕ್ತಿಯ ಬಳಿ ಎಷ್ಟು ಸಮಯವಿರುತ್ತದೆ ಎಂಬುದನ್ನು ಸೂಚಿಸಲು, ಮತ್ತು ಸಮಯದ ಮೌಲ್ಯವನ್ನು ತಿಳಿಸಲು ಕೊರಳಿಗೆ ಗಡಿಯಾರವನ್ನು ಹಾಕಿಕೊಂಡಿದ್ದರು, ಮತ್ತು ಸಮಯ ಹಾಗು ಹಣದಲ್ಲಿ ಮನುಷ್ಯ ಯಾವುದರ ಹಿಂದೆ ಹೋಗುತ್ತಾನೆ ಎಂಬುದಕ್ಕೆ ಚೀಲದಲ್ಲಿ ಹಣದ ಕಂತೆಗಳನ್ನು ಇಟ್ಟುಕೊಂಡು ರಸ್ತೆಗೆ ಎಸೆಯುತ್ತಿದ್ದುದನ್ನು ನಾವು ಗಮನಿಸಿದ್ದೇವೆ. ಒಬ್ಬ ವ್ಯಕ್ತಿಯ ಬಳಿ ಅಲ್ಪ ಸಮಯವಿದ್ದರೂ ಸಹ ಅದನ್ನು ಉದ್ದೇಶಪೂರ್ವಕವಾಗಿ ತಮ್ಮದೇ ಸ್ವಂತ ಬಿಸಿನೆಸ್‌ಗೆ ಉಪಯೋಗಿಸಿಕೊಳ್ಳುವ ಬದಲು ಎಲ್ಲೋ ಸಿಗುವ ಕ್ಷಣಿಕ ಹಣದ ಹಿಂದೆ ಹೋಗಿ ತಮ್ಮ ಅಮೂಲ್ಯವಾದ ಸಮಯವನ್ನು ಹೇಗೆ ವ್ಯರ್ಥ ಮಾಡಿಕೊಳ್ಳುತ್ತಿದ್ದಾನೆ ಜನರಿಗೆ ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಅವರು ಇಂತಹ ಒಂದು ವಿಶೇಷ ಕಾರ್ಯವನ್ನು ಪ್ರಯೋಗ ಮಾಡಿದ್ದಾರೆ ಎಂದು ಊಹಿಸಬಹುದು.

ತಮ್ಮ Anchor Arun Foundation ಅಡಿಯಲ್ಲಿ ಅನಾಥಾಶ್ರಮಗಳಿಗೆ ನೆರವಾಗಿದ್ದ ಅರುಣ್.

ಆದರೆ ನಮ್ಮ ಕನ್ನಡದ ಮಾಧ್ಯಮಗಳು ಅವರ ನಿಜವಾದ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಯೋಚನೆಗು ಹೋಗಿಲ್ಲ ಎಂಬುದು ದುರಂತವಾಗಿದೆ.

ಅರುಣ್‌ ಅವರ ಬಗ್ಗೆ ಅಪಪ್ರಚಾರ ಮಾಡಿದ ಕನ್ನಡದ ಹೆಸರಾಂತ ನ್ಯೂಸ್‌ ಚಾನೆಲ್‌ಗಳ ಹೆಸರನ್ನು ಅವರು ನಿನ್ನೆ ಯುಟ್ಯೂಬ್‌ನಲ್ಲಿ ಹಾಕಿರುವ ವೀಡಿಯೋದಲ್ಲಿ ಹೆಸರಿಸಿದ್ದಾರೆ. ಅರುಣ್‌ ಅವರ ಬಗ್ಗೆ ಸತ್ಯಾಂಶವನ್ನು ತಿಳಿದುಕೊಂಡವರು ಅವರ ಈ ಘಟನೆಯ ಬಗ್ಗೆ ನಿಜಾಂಶವನ್ನು ಕೆಳಗಿರುವ ವೀಡಿಯೋದಲ್ಲಿ ತಿಳಿಸಿದ್ದಾರೆ.

ಅರುಣ್‌ ಅವರ ಈ ರೀತಿಯ ವರ್ತನೆಯು ಅನೇಕ ಜನರಲ್ಲಿ ಅನುಮಾನಕ್ಕೆ ಕಾರಣವಾಗಿರುವುದು ನಿಜ ಆಗಿರಬಹುದು ಆದರೆ ಇದರ ಹಿಂದಿನ ಸತ್ಯಾಂಶವನ್ನು ಅರ್ಥಮಾಡಿಕೊಂಡವರು ತುಂಬಾನೆ ಕಡಿಮೆ, ಇದೊಂದು ಬೇಸರದ ಸಂಗತಿಯಾಗಿದೆ.

Anchor Arun Full Details

Youtube Channel : Click Here

Instagram : Click Here

📞 Anchor Arun: 8553204200

📌 Location: 552, 3rd Floor E Vinayaka, HBCS Layout, Naagarabhaavi, Bengaluru, 560072

📧 Bookings: [email protected]

Anchor Arun Begging in Bangalore Video

During Covid -19 Anchor Arun make this idea to motivate people who suffered from Covid 19 problems. his strategy of begging in public to collect some amount from people is to help employees or need people It may be crazy, but his concern is awesome and a super idea. He is trending all over India Now!

Leave your vote

Treading

Load More...

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ